ಬುಧವಾರ, ನವೆಂಬರ್ 22, 2017

ಬೆಂಗಳೂರು ನಗರದ ಮಾರುಕಟ್ಟೆ, ಹಾಪ್‌ ಕಾಮ್ಸ್‌ಗಳಲ್ಲಿ ತರಕಾರಿಗಳ ಬೆಲೆಗಳಲ್ಲಿ ಹೆಚ್ಚಳವಾಗಿದೆ. ಕೆಲವು ತರಕಾರಿಗಳನ್ನು ಹೊರತುಪಡಿಸಿದರೆ ಉಳಿದವುಗಳ ಬೆಲೆ 50 ರೂ. ದಾಟಿದೆ.
Hike in vegetables prices in Bengaluru
ಹಾಪ್ ಕಾಮ್ಸ್ ಇಂದಿನ ದರ ಪಟ್ಟಿ ಪ್ರಕಾರ ಬೀನ್ಸ್ 36, ಬೀಟ್ ರೋಟ್ 57, ಬದನೆಕಾಯಿ (ಬಿಳಿ) 50, ಕ್ಯಾಪ್ಸಿಕಂ 54, ಕ್ಯಾರೆಟ್ (ನಾಟಿ) 92, ಕ್ಯಾರೆಟ್ (ಊಟಿ) 96, ಹೂ ಕೋಸು 50, ಈರುಳ್ಳಿ 57, ಆಲೂಗೆಡ್ಡೆ 213, ಟೊಮೆಟೋ 49 ರೂ. ದರವಿದೆ.
ಜಮೀರ್ ಅಹಮದ್ ಕನ್ನಡ ಭಾಷಣಕ್ಕೆ ಗಹಗಹಿಸಿ ನಕ್ಕ ನಾಗಮಂಗಲ!

Read more at: https://kannada.oneindia.com/news/karnataka/

ಮಂಗಳವಾರ, ನವೆಂಬರ್ 21, 2017

muraleedhara upadhya hiriadka: ಸಾಹಿತ್ಯಪ್ರಿಯರೇಕೆ ಮಂಗಳೂರಿನಿಂದ ಕಯ್ಯೂರಿಗೆ ಪ್ರಯಾಣ ಬೆಳೆಸಿದರು?

muraleedhara upadhya hiriadka: ಸಾಹಿತ್ಯಪ್ರಿಯರೇಕೆ ಮಂಗಳೂರಿನಿಂದ ಕಯ್ಯೂರಿಗೆ ಪ್ರಯಾಣ ಬೆಳೆಸಿದರು?

ಸಣ್ಣ ಕಥೆ ೨

ಆಂಗ್ಲರ ಆಳ್ವಿಕೆಯ ಕಾಲ.  ಮುಂಬಯಿಯ ವ್ಯಾಟ್ಸನ್ ಎಂಬ ಭವ್ಯ ಹೋಟೆಲ್ . ಒಂದು ದಿನ  ಆ ಹೋಟೆಲ್  ಗೆ ಬಂದ ಭಾರತೀಯ ಯುವಕನನ್ನು ಮ್ಯಾನೇಜರ್ ತಡೆದುಬಿಟ್ಟ. ಇದು ಬಿಳಿಯರಿಗೆ ಮಾತ್ರ ಕರಿಯರಿಗೆ ಪ್ರವೇಶವಿಲ್ಲ ಎಂದ.   ಆ ಯುವಕನ ಸ್ವಾಭಿಮಾನ  ಜಾಗೃತವಾಯಿತು.  ಇದಕ್ಕಿಂತ   ಭವ್ಯ  ಹೋಟೆಲ್ ಕಟ್ಟುತ್ತೇನೆ.  ಅಲ್ಲಿ ಭಾರತೀಯರಿಗೆ  ಮಾತ್ರವೇ  ಪ್ರವೇಶ,ಬೇರೆಯವರಿಗಿರದು.  ನಿಮ್ಮಂತಹ ಬಿಳಿಯರನ್ನು  ಇಲ್ಲಿ  ಕೆಲಸಕ್ಕಿಟ್ಟುಕೊಳ್ಳುತ್ತೇನೆ  ಎಂದು  ಆತ್ಮ ವಿಶ್ವಾಸದ  ದನಿಯಲ್ಲಿ ಗುಡುಗಿದ .  ಯುವಕನ ಆವೇಶದ ಮಾತು  ಕೇಳಿ ಸುತ್ತಮುತ್ತಲಿದ್ದವರೆಲ್ಲ  ನಕ್ಕುಬಿಟ್ಟರು . ಹತ್ತಿರದ ನೆಂಟರಂತೂ ನಿನ್ನಿಂದ ಸಾಧ್ಯವಾಗದು ಎಂದು ಎಂದು ಅವನನ್ನು ನಿರುತ್ಸಾಹಗೊಳಿಸಿದರು. ಈ ಘಟನೆಯಾದ ಮೇಲೆ ಆ ಯುವಕ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಮುಂಬೈಯಿಯ ಪ್ರಮುಖ ಪ್ರದೇಶದಲ್ಲಿ ವಿಸ್ತಾರವಾದ ಸ್ಥಳ ಖರೀದಿಸಿದ. ನೋಡ ನೋಡುತ್ತಿದ್ದಂತೆ ಅತ್ಯಾಧುನಿಕವಾದ ಭವ್ಯ ಹೋಟೆಲ್ ಕಟ್ಟಡ ಅಲ್ಲಿ ತಲೆಯೆತ್ತಿತ್ತು. ಜಗತ್ತಿನ ಪ್ರಸಿದ್ಧ  ತಾಣಗಳಿಂದಲೇ  ತರಿಸಿದ ವಸ್ತುಗಳಿಂದ ಆ ಹೋಟೆಲ್ ನಿರ್ಮಾಣಗೊಂಡಿತ್ತು. ಆ ಕಾಲದಲ್ಲಿ ಜಗತ್ತಿನಲ್ಲಿ ಎಲ್ಲೂ ಕಂಡುಬರದ  ವಿಶಿಷ್ಟ ವಾಸ್ತುಶಿಲ್ಪ ಸ್ವರ್ಗವನ್ನೇ ಧರೆಗಿಳಿಸಿದಂತಹ  ಹೋಟೆಲ್ ಅದಾಗಿತ್ತು ಅದಕ್ಕೆ ಆಗಲೇ ನಾಲ್ಕುವರೆ ಕೋಟಿ  ರೂ . ವೆಚ್ಚವಾಗಿತ್ತು!! 1903 ರಲ್ಲಿ ಈ ವೈಭವದ ಹೋಟೆಲ್ ಆರಂಭವಾಯಿತು. ಅಲ್ಲಿಯ ಆಳುಕಾಳುಗಳು  ವಿದೇಶಿಗರು! ಅಲ್ಲಿನ ಗ್ರಾಹಕ ಪ್ರಭುಗಳು  ಭಾರತೀಯರು!    ಆ ಹೊಟೇಲೇ ತಾಜ್ ಹೋಟೆಲ್. ಅದರ ರೂವಾರಿ ಜಮಶೇಡ್ಜಿ ನಸರ್ವಾನ್ ಜಿ  ಟಾಟಾ.  ವ್ಯಾಟ್ಸನ್ ಹೋಟೆಲ್ ಗೆ  ಪ್ರವೇಶ ನೀಡದೇ ಆಂಗ್ಲರು ಮಾಡಿದ ಅವಮಾನದ ಸೇಡನ್ನು ಈ ರೀತಿ ಆತ ತೀರಿಸಿಕೊಂಡಿದ್ದ . ವೈಭವಕ್ಕೆ ಹೆಸರಾದ ತಾಜ್ ಹೋಟೆಲ್ ನ ಶಾಖೆಗಳು ಇಂದು ಇಶ್ವದಲ್ಲೆಲ್ಲ ಹರಡಿವೆ. ಲಾಭದ ಶೇ.60 ರಷ್ಟನ್ನು ಬಾಂಬೆ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು ವಿನಿಯೋಗಿಸಲಾಗುತ್ತಿದೆ.


                       ಆತ್ಮವಿಶ್ವಾಸ  ಇದ್ದವನು  ಏನನ್ನೂ ಮಾಡಬಲ್ಲ ㉈


ಸೋಮವಾರ, ನವೆಂಬರ್ 20, 2017

ಸಣ್ಣ ಕಥೆ






Image result for lal bahadur shastri photosಲಾಲ್  ಬಹದ್ದೂರ್  ಶಾಸ್ತ್ರಿ   ಪ್ರಧಾನ ಮಂತ್ರಿ ಆದವರು . ಅವರ ಹಿರಿಯ ಮಗ ಹರಿಕೃಷ್ಣ ಆಗ ಅಶೋಕ  ಲೈಲ್ಯಾಂಡ್  ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಶಾಸ್ತ್ರಿ ಅವರು  ಪ್ರಧಾನ ಮಂತ್ರಿ ಆದೊಡನೆ ಕಂಪೆನಿಯು ಹರಿಕೃಷ್ಣನಿಗೆ ಬಡ್ತಿ ನೀಡಿತು .ಹರಿಕೃಷ್ಣ ಇದನ್ನು ಕನಸಿನಲ್ಲೂ ಎಣಿಸಿರಲಿಲ್ಲ.   ಒಂದು ದಿನ ಬೆಳಿಗ್ಗೆ ತಿಂಡಿ ತಿನ್ನುವಾಗ ಮಗ ತಂದೆಯ ಬಳಿ ಈ ಸಂಗತಿ ಹೇಳಿದ.   ಇದನ್ನು  ಕೇಳಿ ದ  ಕೂಡಲೇ  ಶಾಸ್ತ್ರೀಜಿ ಗಂಭೀರವಾದರು. ಬಡ್ತಿ ನೀಡಿದ್ದು ನಿನ್ನ ಕ್ಲೇಲಸ ನೋಡಿ ಅಲ್ಲ , ಬದಲಾಗಿ  ನನ್ನ ಪದವಿ ನೋಡಿ. ಮುಂದೆ  ಏನಾದರೂ ಆ ಕಂಪನಿಯವರು ಯಾವುದಾದರೂ ಕೆಲಸಕ್ಕೆ ನನ್ನ ಬಳಿ ಬಂದರಿನ್ನು ,  ಆಗ ನಾನು ಅವರಿಗೆ ನ್ಯಾಯಸಮ್ಮತವಾಗಿ  ಕೆಲಸ ಮಾಡಿಕೊಟ್ಟರೂ ಜನ ಏನಂದುಕೊಂಡಾರು ?? ನಿನ್ನ ಸಹೋದ್ಯೋಗಿಗಳು ಈ ಕುರಿತು ಏನು  ಭಾವಿಸಿಯಾರು ??ಎಂದರು.  ಹರಿಕೃಷ್ಣ ಏನೂ ಮಾತನಾಡಲಿಲ್ಲ .   ಬಡ್ತಿ ದೊರೆತ ಸಂತಸ ಜರ್ರನೆ ಇಳಿದು ಹೋಗಿತ್ತು .  ಹರಿಕೃಷ್ಣ , ನೀನು ಆ ಕಂಪನಿಗೆ  ರಾಜೀನಾಮೆ ಕೊಡು.  ನಾನು ಪ್ರಧಾನಿ ಆಗಿರುವವರೆಗೂ  ಕೆಲಸ ಮಾಡಬೇಡ ಎಂದು ಶಾಸ್ತ್ರೀಜಿ ಮಗನಿಗೆ ಹೇಳಿದರು. ಹರಿಕೃಷ್ಣ  ತಂದೆಯ ಮಾತನ್ನು ಪಾಲಿಸಿದರು . .......  !!!!!                                                                                                                                                                                                                                                                                                                                                                                                                                                                                                            ಪ್ರಭಾವವಲ್ಲ ,  ಯೋಗ್ಯತೆಯೇ  ಮಾನದಂಡ 




ಗುರುವಾರ, ನವೆಂಬರ್ 16, 2017

ಜೈ ಭಗತ್ ಸಿಂಗ್

ನನ್ನ ಮೂರನೇ ದೇವರು .... ಭಾರತ ಮಾತೆಯ ಹೆಮ್ಮೆಯ ಪುತ್ರ ಶ್ರೀ ಭಗತ್ ಸಿಂಗ್ ಅವರಿಗೆ ಹೃದಯ ಸ್ಪರ್ಶಿ ನಮನಗಳು ...  Image result for bhagat singh

ಬೆಂಗಳೂರು ನಗರದ ಮಾರುಕಟ್ಟೆ, ಹಾಪ್‌ ಕಾಮ್ಸ್‌ಗಳಲ್ಲಿ  ತರಕಾರಿಗಳ  ಬೆಲೆಗಳಲ್ಲಿ ಹೆಚ್ಚಳವಾಗಿದೆ. ಕೆಲವು ತರಕಾರಿಗಳನ್ನು ಹೊರತುಪಡಿಸಿದರೆ ಉಳಿದವುಗಳ ಬೆಲೆ 50 ರೂ. ದಾಟ...