ಆಂಗ್ಲರ ಆಳ್ವಿಕೆಯ ಕಾಲ. ಮುಂಬಯಿಯ ವ್ಯಾಟ್ಸನ್ ಎಂಬ ಭವ್ಯ ಹೋಟೆಲ್ . ಒಂದು ದಿನ ಆ ಹೋಟೆಲ್ ಗೆ ಬಂದ ಭಾರತೀಯ ಯುವಕನನ್ನು ಮ್ಯಾನೇಜರ್ ತಡೆದುಬಿಟ್ಟ. ಇದು ಬಿಳಿಯರಿಗೆ ಮಾತ್ರ ಕರಿಯರಿಗೆ ಪ್ರವೇಶವಿಲ್ಲ ಎಂದ. ಆ ಯುವಕನ ಸ್ವಾಭಿಮಾನ ಜಾಗೃತವಾಯಿತು. ಇದಕ್ಕಿಂತ ಭವ್ಯ ಹೋಟೆಲ್ ಕಟ್ಟುತ್ತೇನೆ. ಅಲ್ಲಿ ಭಾರತೀಯರಿಗೆ ಮಾತ್ರವೇ ಪ್ರವೇಶ,ಬೇರೆಯವರಿಗಿರದು. ನಿಮ್ಮಂತಹ ಬಿಳಿಯರನ್ನು ಇಲ್ಲಿ ಕೆಲಸಕ್ಕಿಟ್ಟುಕೊಳ್ಳುತ್ತೇನೆ ಎಂದು ಆತ್ಮ ವಿಶ್ವಾಸದ ದನಿಯಲ್ಲಿ ಗುಡುಗಿದ . ಯುವಕನ ಆವೇಶದ ಮಾತು ಕೇಳಿ ಸುತ್ತಮುತ್ತಲಿದ್ದವರೆಲ್ಲ ನಕ್ಕುಬಿಟ್ಟರು . ಹತ್ತಿರದ ನೆಂಟರಂತೂ ನಿನ್ನಿಂದ ಸಾಧ್ಯವಾಗದು ಎಂದು ಎಂದು ಅವನನ್ನು ನಿರುತ್ಸಾಹಗೊಳಿಸಿದರು. ಈ ಘಟನೆಯಾದ ಮೇಲೆ ಆ ಯುವಕ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಮುಂಬೈಯಿಯ ಪ್ರಮುಖ ಪ್ರದೇಶದಲ್ಲಿ ವಿಸ್ತಾರವಾದ ಸ್ಥಳ ಖರೀದಿಸಿದ. ನೋಡ ನೋಡುತ್ತಿದ್ದಂತೆ ಅತ್ಯಾಧುನಿಕವಾದ ಭವ್ಯ ಹೋಟೆಲ್ ಕಟ್ಟಡ ಅಲ್ಲಿ ತಲೆಯೆತ್ತಿತ್ತು. ಜಗತ್ತಿನ ಪ್ರಸಿದ್ಧ ತಾಣಗಳಿಂದಲೇ ತರಿಸಿದ ವಸ್ತುಗಳಿಂದ ಆ ಹೋಟೆಲ್ ನಿರ್ಮಾಣಗೊಂಡಿತ್ತು. ಆ ಕಾಲದಲ್ಲಿ ಜಗತ್ತಿನಲ್ಲಿ ಎಲ್ಲೂ ಕಂಡುಬರದ ವಿಶಿಷ್ಟ ವಾಸ್ತುಶಿಲ್ಪ ಸ್ವರ್ಗವನ್ನೇ ಧರೆಗಿಳಿಸಿದಂತಹ ಹೋಟೆಲ್ ಅದಾಗಿತ್ತು ಅದಕ್ಕೆ ಆಗಲೇ ನಾಲ್ಕುವರೆ ಕೋಟಿ ರೂ . ವೆಚ್ಚವಾಗಿತ್ತು!! 1903 ರಲ್ಲಿ ಈ ವೈಭವದ ಹೋಟೆಲ್ ಆರಂಭವಾಯಿತು. ಅಲ್ಲಿಯ ಆಳುಕಾಳುಗಳು ವಿದೇಶಿಗರು! ಅಲ್ಲಿನ ಗ್ರಾಹಕ ಪ್ರಭುಗಳು ಭಾರತೀಯರು! ಆ ಹೊಟೇಲೇ ತಾಜ್ ಹೋಟೆಲ್. ಅದರ ರೂವಾರಿ ಜಮಶೇಡ್ಜಿ ನಸರ್ವಾನ್ ಜಿ ಟಾಟಾ. ವ್ಯಾಟ್ಸನ್ ಹೋಟೆಲ್ ಗೆ ಪ್ರವೇಶ ನೀಡದೇ ಆಂಗ್ಲರು ಮಾಡಿದ ಅವಮಾನದ ಸೇಡನ್ನು ಈ ರೀತಿ ಆತ ತೀರಿಸಿಕೊಂಡಿದ್ದ . ವೈಭವಕ್ಕೆ ಹೆಸರಾದ ತಾಜ್ ಹೋಟೆಲ್ ನ ಶಾಖೆಗಳು ಇಂದು ಇಶ್ವದಲ್ಲೆಲ್ಲ ಹರಡಿವೆ. ಲಾಭದ ಶೇ.60 ರಷ್ಟನ್ನು ಬಾಂಬೆ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲು ವಿನಿಯೋಗಿಸಲಾಗುತ್ತಿದೆ.
㉒ ಆತ್ಮವಿಶ್ವಾಸ ಇದ್ದವನು ಏನನ್ನೂ ಮಾಡಬಲ್ಲ ㉈
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ